What We Do
Our Activities
From free medical camps to educational scholarships, blood donation drives to community celebrations — follow our latest activities and events on the ground.
In Detail
Recent Activity Updates

ಕ್ಷಯ ರೋಗಿಗಳ ಪಾಲಿನ ಸಂಜೀವಿನಿ- ಸೇವಾಂಜಲಿ ಪ್ರತಿಷ್ಠಾನ
ಕ್ಷಯ ರೋಗ ಮುಕ್ತ ಸಮಾಜದ ಸಾಕಾರಕ್ಕೆ ಸರ್ವ ಸಿದ್ದತೆ ನಡೆಯುತ್ತಿದೆ. ವಿವಿಧ ಬಗೆಯ ಆರೋಗ್ಯ ಸೇವೆ ಈ ನೆಲೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಇದರ ಮಧ್ಯೆಯೇ ಕ್ಷಯ ರೋಗಿಗಳಾಗಿ ಸಮಾಜದಲ್ಲಿರುವ ಬಡ ಜನರಿಗೆ ಪ್ರತೀ ತಿಂಗಳು ಪೌಷ್ಟಿಕಾಂಶವುಳ್ಳ ಆಹಾರದ ಕಿಟ್ ಒದಗಿಸುವ ಕರಾವಳಿಯಲ್ಲಿಯೇ ಅಪರೂಪದ ಕಾರ್ಯ ʻಸೇವಾಂಜಲಿʼ ಮೂಲಕ ನಡೆಯುತ್ತಿದೆ.
ಸಮಾಜದ ವಿವಿಧ ಸ್ತರದ ಕಷ್ಟ ಕಾರ್ಪಣ್ಯಗಳಿಗೆ ಬೆಂಗಾವಲಾಗಿ ನಿಂತು ಸೇವೆ ಸಲ್ಲಿಸುತ್ತಿರುವ ಫರಂಗಿಪೇಟೆಯಲ್ಲಿರುವ ಸೇವಾಂಜಲಿಪ್ರತಿಷ್ಠಾನವು ಕ್ಷಯ ರೋಗಿಗಳ ಪಾಲಿಗೆ ನೈಜ ಸಂಜೀವಿನಿಯಾಗಿ ಸೇವೆ ಸಲ್ಲಿಸುತ್ತಿದೆ.
ಏನಿದು ಸೇವಾ ಯೋಜನೆ?
ಕ್ಷಯ ಮುಕ್ತ ಸಮಾಜ ನಿರ್ಮಾಣದ ಕಾರಣದಿಂದ "ಪ್ರಧಾನ ಮಂತ್ರಿ ಟಿಬಿ ಮುಕ್ತ್ ಭಾರತ್ ಅಭಿಯಾನ್" ಅನ್ನು ಪ್ರಧಾನಿ ಅವರು ಆರಂಭಿಸಿದ್ದರು. ಇದನ್ನು ಸಾಕಾರಗೊಳಿಸುವ ಆಶಯದಿಂದ ಫರಂಗಿಪೇಟೆಯಲ್ಲಿರುವ ಸೇವಾಂಜಲಿ ಸಂಸ್ಥೆ ವಿಶೇಷ ಅಭಿಯಾನಕ್ಕೆ ಮುಂದಡಿ ಇಟ್ಟಿತ್ತು. ಕ್ಷಯರೋಗಿಗಳಿಗೆ ಔಷಧಿಯ ಜತೆಗೆ ಪೌಷ್ಠಿಕಾಂಶದ ಆಹಾರ ಮುಖ್ಯವಾದ್ದರಿಂದ ಬಡತನದಲ್ಲಿರುವವರು ಅದರ ಸೇವನೆ ಮಾಡುವುದು ಕಷ್ಟ ಸಾಧ್ಯ ಎಂಬ ಕಾರಣದಿಂದ ಕ್ಷಯ ರೋಗಿಗಳಿಗೆ ಪೌಷ್ಠಿಕಾಂಶದ ಕಿಟ್ ಪ್ರತೀ ತಿಂಗಳು ನೀಡುವ ಯೋಚನೆಯನ್ನು ಸೇವಾಂಜಲಿ ಆರಂಭಿಸಿತು.
ಜಿಲ್ಲೆಯ ಯಾವುದೇ ಭಾಗದಲ್ಲಿ ಕ್ಷಯರೋಗಿಗಳು ಇದ್ದಲ್ಲಿ ಸ್ಥಳೀಯ ಆರೋಗ್ಯ ಕೇಂದ್ರ, ಆಶಾ ಕಾರ್ಯಕರ್ತೆಯರ ಮಾಹಿತಿಯ ಮೇರೆಗೆ ಸೇವಾಂಜಲಿ ಸಂಸ್ಥೆಯನ್ನು ಸಂಪರ್ಕಿಸುತ್ತಾರೆ. ಅವರ ಆಧಾರ್, ವೈದ್ಯರು ನೀಡಿದ ಚಿಕಿತ್ಸೆಯ ವಿವರ, ಪಡಿತರ ಚೀಟಿ ಪಡೆದು ಅವರಿಗೆ ಪ್ರತೀ ತಿಂಗಳ 5ನೇ ತಾರೀಕಿನಂದು ಪೌಷ್ಠಿಕಾಂಶದ ಕಿಟ್ ಒದಗಿಸಲಾಗುತ್ತದೆ.
========
ಪ್ರಧಾನಿಗೆ ಮಾಹಿತಿ
ಕ್ಷಯ ರೋಗಿಗಳ ಆರೋಗ್ಯ ತಪಾಸಣೆ, ಚಿಕಿತ್ಸೆ ನೀಡುವುದು ಹಾಗೂ ಕಿಟ್ ವಿತರಣೆ ಈ ಎಲ್ಲಾ ಸಂಗತಿಗಳನ್ನು ಪ್ರತೀ ತಿಂಗಳು ಪ್ರಧಾನಿ ಕಾರ್ಯಾಲಯಕ್ಕೆ ಪ್ರತಿಷ್ಠಾನದ ವತಿಯಿಂದ ಇಮೈಲ್ ಮೂಲಕ ತಿಳಿಸಲಾಗುತ್ತದೆ.
======
ಸ್ವಏನಿರುತ್ತದೆ ಕಿಟ್ ನಲ್ಲಿ?
2022ರಲ್ಲಿ ಆರಂಭವಾದ ಸೇವಾಂಜಲಿ ಪ್ರತಿಷ್ಠಾನದ ಈ ಯೋಜನೆಯಲ್ಲಿ 225 ಕ್ಷಯರೋಗಿಗಳು ಕಿಟ್ ಪಡೆಯುತ್ತಿದ್ದಾರೆ. ಪ್ರತೀ ತಿಂಗಳು 30ರಿಂದ 40 ಮಂದಿ ಕಿಟ್ ಪಡೆದುಕೊಳ್ಳುತ್ತಾರೆ. ಒಬ್ಬ ಕ್ಷಯ ರೋಗಿಗೆ 6 ತಿಂಗಳವರೆಗೆ ಕಿಟ್ ನೀಡಲಾಗುತ್ತದೆ. 1 ಆಹಾರದ ಕಿಟ್ ಗೆ ಸುಮಾರು 1 ಸಾವಿರ ರೂ. ವೆಚ್ಚ ತಗುಲುತ್ತದೆ. 1 ಕಿಟ್ ನಲ್ಲಿ ಮೊಟ್ಟೆ 30, ಹಾಲಿನ ಹುಡಿ, ರಾಗಿ, ಹುರುಳಿ, ಹೆಸರು, ಕಡ್ಲೆ, ಗೋಧಿ, ಬೆಲ್ಲ, ನಂದಿನಿ ತುಪ್ಪ, ತೊಗರಿ ಬೇಳೆ ಇರುತ್ತದೆ.
==========
ಸಮಾಜದ ಶ್ರೇಯಸ್ಸಿಗಾಗಿ ಸೇವೆ
ಪ್ರತೀ ಮಂಗಳವಾರ ಸೇವಾಂಜಲಿಯಲ್ಲಿ ಕಣ್ಣು, ದಂತ, ವೈದ್ಯಕೀಯ ಶಿಬಿರ ಇರುತ್ತದೆ. ಈಗ 850ನೇ ಶಿಬಿರ ನಡೆಯುತ್ತಿದೆ. ಕಣ್ಣಿನ ಶಸ್ತ್ರಚಿಕಿತ್ಸೆ, ಹೆರಿಗೆ ಸಹಿತ ವಿವಿಧ ಆರೋಗ್ಯ ಸೇವೆಯನ್ನು ಖಾಸಗಿ ಆಸ್ಪತ್ರೆಯ ಸಹಕಾರದೊಂದಿಗೆ ಉಚಿತವಾಗಿ ನಡೆಸಲಾಗುತ್ತಿದೆ. ಇದಕ್ಕೂ ಮಿಗಿಲಾಗಿ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಷ್ಠಾನವು ಶೈಕ್ಷಣಿಕ ನೆರವನ್ನು ಸದ್ದಿಲ್ಲದೆ ನೀಡುತ್ತಿದೆ. ಹಲವು ಮನೆಗಳ ದುರಸ್ತಿ ಸಹಿತ ಅವರ ಬದುಕಿಗೆ ಪ್ರತಿಷ್ಠಾನವು ಇತರರ ನೆರವು ಪಡೆದು ಸ್ಪಂದಿಸುತ್ತಿದೆ. ರಕ್ತದಾನದ ಮೂಲಕ ದಾಖಲೆಯ ಸೇವೆ ಸೇವಾಂಜಲಿಯದ್ದಾಗಿದೆ. ಸೇವಾಂಜಲಿಯ ಸಹ ಸಂಸ್ಥೆಯ ಮೂಲಕ ಗಣೇಶೋತ್ಸವ ಹಾಗೂ ವರಮಹಾಲಕ್ಷ್ಮೀ ಪೂಜೆ ನಡೆಯುವುದು ಇಲ್ಲಿನ ಮತ್ತೊಂದುಫರಂಗಿಪೇಟೆ
==========
ರೋಗಿಗಳಿಗೆ ಆಹಾರವೂ ಮುಖ್ಯ
ಹಲವು ದಾನಿಗಳ ಸಹಕಾರ, 100 ಮಂದಿ ಯುವ ಸಮೂಹದ ನಿತ್ಯ ಸ್ಪಂದನೆಯ ಮೂಲಕ ಸಮಾಜ ಸೇವೆ ಸಾಕಾರವಾಗುತ್ತಿದೆ. ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಶೈಕ್ಷಣಿಕ/ಆರ್ಥಿಕ ನೆರವು ಇತ್ಯಾದಿ ಕಾರ್ಯದ ಜತೆಗೆ ಕ್ಷಯರೋಗಿಗಳಿಗೆ ಮಾಸಿಕವಾಗಿ ಪೌಷ್ಠಿಕಾಂಶದ ಕಿಟ್ ನೀಡುವ ಕಾರ್ಯ ಯಶಸ್ವಿಯಾಗಿ ನಡೆಸುತ್ತಿದ್ದೇವೆ. ಕ್ಷಯ ರೋಗಿಗಳಿಗೆ ಕೇವಲ ಚಿಕಿತ್ಸೆ ಮಾತ್ರ ಸಾಕಾಗುವುದಿಲ್ಲ. ಪೌಷ್ಠಿಕಾಂಶದ ಆಹಾರವೂ ಮುಖ್ಯವಾಗುತ್ತದೆ. ಹೀಗಾಗಿ ಕಿಟ್ ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ.
-ಕೆ.ಕೃಷ್ಣಕುಮಾರ್ ಪೂಂಜ, ಆಡಳಿತ ಟ್ರಸ್ಟಿ, ಸೇವಾಂಜಲಿ ಪ್ರತಿಷ್ಠಾನ, ಫರಂಗಿಪೇಟೆ
ವರದಿ: ದಿನೇಶ್ ಇರಾ

ಸೇವಾಂಜಲಿಯಲ್ಲಿ ಕ್ಷಯ ರೋಗಿಗಳಿಗೆ ದವಸ ಧಾನ್ಯ ವಿತರಣೆ
ಆಹಾರ ಸೇವನೆಯ ಮೂಲಕ ಆರೋಗ್ಯವಂತರಾಗಿ ಬಾಳಬೇಕು. ಔಷಧಿಯನ್ನು ವೃತದಿಂದ ಸೇವಿಸಬೇಕು. ನಾವು ಸದೃಢರಾಗಿದ್ದರೆ ನಮ್ಮ ದೇಶ ಸದೃಢವಾಗಲಿದೆ. ಸರಕಾರ ಮಾಡುವ ಕಾರ್ಯದಲ್ಲಿ ಸೇವಾಂಜಲಿ ಪ್ರತಿಷ್ಠಾನ ಕೈ ಜೋಡಿಸಿದಂತೆ ಸೇವಾಂಜಲಿಯ ಸೇವಾ ಕಾರ್ಯದಲ್ಲಿ ನಾವೂ ಕೈ ಜೋಡಿಸೋಣ ಎಂದು ದ.ಕ.ಜಿಲ್ಲಾ ಕಸಾಪ ನಿಕಟಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ನಡೆದ ಕ್ಷಯ ರೋಗಿಗಳಿಗೆ ದವಸಧಾನ್ಯ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರಕಾರದ ಯೋಜನೆಯನ್ನು ಸಮಾಜದ ಜನತೆಗೆ ತಲುಪಿಸುವ ಸೇವಾಂಜಲಿಯ ಕಾರ್ಯ ಅಭಿನಂದನೀಯ ಎಂದು ತಿಳಿಸಿದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೇತನ್ ಆರೋಗ್ಯ ಮಾಹಿತಿ ನೀಡಿ ಕೆಮ್ಮು ಮೊದಲಾದ ಕ್ಷಯ ರೋಗದ ಲಕ್ಷಣಗಳು ಕಂಡು ಬಂದಾಗ ವೈದ್ಯರಿಂದ ತಪಾಸಣೆ ನಡೆಸಿ ಔಷಧಿಯೊಂದಿಗೆ ಪೌಷ್ಟಿಕಾಹಾರ ಸೇವಿಸಿದಾಗ ರೋಗವನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲೂಕಿನ ಕ್ಷಯ ರೋಗಿಗಳನ್ನು ಗುರುತಿಸಿ ಪೌಷ್ಟಿಕಾಹಾರ ದ ಕಿಟ್ ನೀಡಲಾಗಿದೆ. ಇದು 44 ನೇ ತಿಂಗಳ ಕಾರ್ಯಕ್ರಮವಾಗಿದ್ದು ಈವರೆರೆ 225 ಮಂದಿ ಕ್ಷಯರೋಗಿಗಳಿಗೆ ದವಸ ಧಾನ್ಯ ವಿತರಿಸಲಾಗಿದ್ದು 15 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದರು.
ಸೇವಾಂಜಲಿಯ ಟ್ರಸ್ಟಿ, ಕೇಶವ ದೋಟ, ಉದಯ ಕುಮಾರ್ ಮಲ್ಲಿ ವೇದಿಕೆಯಲ್ಲಿ ಇದ್ದರು. ಪ್ರಮುಖರಾದ
ಚಂದ್ರಹಾಸ ಕಡೆಗೋಳಿ, ವಿಕ್ರಂ ಫರಂಗಿಪೇಟೆ, ವಿಜೇತ್ ತುಂಬೆ, ಶಿವರಾಜ್ ಸುಜೀರ್, ದಿನೇಶ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು
ಟ್ರಸ್ಟಿ ದೇವದಾಸ್ ಶೆಟ್ಟಿ ಕೊಡ್ಮಾಣ್ ಕಾರ್ಯಕ್ರಮ ನಿರೂಪಿಸಿದರು.

ಫರಂಗಿಪೇಟೆ :ಕ್ಷಯ ರೋಗಿಗಳಿಗೆ ದವಸ ಧಾನ್ಯದ ಕಿಟ್ ವಿತರಣೆ. ಉತ್ತಮ ಆಹಾರವೇ ಒಳ್ಳೆಯ ಔಷದಿ :ಅನಿಲ್ ಕುಮಾರ್ ಭೂಮರಡ್ಡಿ
ಬಂಟ್ವಾಳ :ಒಳ್ಳೆಯ ಆಹಾರ ಸೇವನೆ ಮಾನವನ ಜೀವನದಲ್ಲಿ ತುಂಬಾ ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ, ಉತ್ತಮ ಆಹಾರವೇ ಒಳ್ಳೆಯ ಔಷದಿ, ಪೌಷ್ಟಿಕ ಆಹಾರ ಸೇವಿಸುವ ಮೂಲಕ ರೋಗ ನಿರೋದಕ ಶಕ್ತಿಯನ್ನು ಹೆಚ್ಚಿಸಿ ರೋಗ ಮುಕ್ತಗೊಳಿಸಬಹುದು.ಸ್ವಾಸ್ತ್ಯ ವ್ಯಕ್ತಿಯಿಂದ ಸ್ವಾಸ್ತ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ದ ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ನಿರ್ದೇಶಕ ಅನಿಲ್ ಕುಮಾರ್ ಭೂಮರಡ್ಡಿ ಹೇಳಿದರು.
ಅವರು ಸೇವಾಂಜಲಿ ಪ್ರತಿಷ್ಠಾನದ ಆಶ್ರಯದಲ್ಲಿ ಸೇವಾಂಜಲಿಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ದವಸ ಧಾನ್ಯದ ಕಿಟ್ ವಿತರಣೆ ಮಾಡಿ ಮಾತನಾಡಿ, ಸಮಾಜಮುಖಿ ಕೆಲಸಕ್ಕೆ ಇಚ್ಛಾಶಕ್ತಿಯಿಂದ ಮುನ್ನುಗ್ಗಿದರೆ ಯಾವುದು ಕೂಡ ಅಸಾಧ್ಯವಲ್ಲ, ಸೇವೆಯೇ ಪರಮ ಧರ್ಮ ಎಂಬ ನೆಲೆಯಲ್ಲಿ ಸೇವಾ ಮನೋಭಾವದಿಂದ ಮುನ್ನಡೆಯುತ್ತಿರುವ ಸೇವಾಂಜಲಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪುದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ. ಸ್ಮೃತಿ ಯು ಮಾತನಾಡಿ ಕ್ಷಯ ರೋಗವನ್ನು ಮುನ್ನೆಚ್ಚರಿಕೆಯಿಂದ ತಡೆಗಟ್ಟಬಹುದು ಹಾಗೂ ಸೇವಾಂಜಲಿ ಪ್ರತಿಷ್ಠಾನ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ
ಕುಮಾರ್ ಪೂಂಜ ಪ್ರಸ್ತವಿಕವಾಗಿ ಮಾತನಾಡಿ , 43 ತಿಂಗಳುಗಳಲ್ಲಿ ರೂ 14ಲಕ್ಷ ವ್ಯಹಿಸಿ 224 ಕ್ಷಯ ರೋಗಿಗಳಿಗೆ ದವಸ ಧಾನ್ಯದ ಕಿಟ್ ವಿತರಿಸಲಗಿದೆ, ಪ್ರತಿಷ್ಠಾನದ ಮೂಲಕ ನಿರಂತರ ಅರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ತಿಂಗಳಿಗೆ 3ಸಾವಿರ ರೋಗಿಗಳು ಶಿಬಿರದ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಅರ್ಜುನ ಕೆ ಪೂಂಜ ಉಪಸ್ಥಿತರಿದ್ದರು.
ಪ್ರಮುಖರಾದ ಪದ್ಮನಾಭ ಶೆಟ್ಟಿ ಪುಂಚಮೆ,ಭಾಸ್ಕರ ಚೌಟ ಕುಮ್ದೇಲ್, ದಿನೇಶ್ ಪ್ರಗತಿ,ಪದ್ಮನಾಭ ಕಿದೆಬೆಟ್ಟು, ಸುರೇಶ ಶೆಟ್ಟಿ ಪೆಲಪಾಡಿ,ಮೋಹನ್ ಬೆಂಜನಪದವು, ನಾರಾಯಣ ಬಡ್ದುರು, ಪ್ರಶಾಂತ್ ತುಂಬೆ,ಶಿವರಾಜ್ ಸುಜೀರು,ಗಿರೀಶ್ ಪಂದೆಜಾರು,ವಿದ್ಯಾ,ಗಾಯತ್ರಿ ಶೋಭಾ,ಸಾರಮ್ಮ, ಕಾವ್ಯ ಬೆರ್ವ ಮತ್ತಿತರರು ಉಪಸ್ಥಿತರಿದ್ದರು.

ಸೇವಾಂಜಲಿಯಲ್ಲಿ 135ನೇ ರಕ್ತದಾನ ಶಿಬಿರ, 57 ಯುನಿಟ್ ರಕ್ತ ಸಂಗ್ರಹ
ಬಂಟ್ವಾಳ: ತುರ್ತು ಸಂದರ್ಭದಲ್ಲಿ ಜನರಿಗೆ ಆಗೂ ಆಸ್ಪತ್ರೆಗಳ ರಕ್ತನಿಧಿಗೆ ರಕ್ತದ ಅವಶ್ಯಕತೆ ಇದ್ದಾಗ ಸೇವಾಂಜಲಿ ಸಂಸ್ಥೆ ನಿರಂತರ ಶಿಬಿರಗಳನ್ನು ಹಮ್ಮಿಕೊಂಡು ರಕ್ತದ ಬೇಡಿಕೆಯನ್ನು ಪೂರೈಸುತ್ತಿರುವುದು ಉತ್ತಮ ಕಾರ್ಯ ಎಂದು ಬಂಟ್ವಾಳ ಉಪವಿಭಾಗದ ಸಹಾಯಕ ಅಧೀಕ್ಷಕ ಯಶ್ ಕುಮಾರ್ ಶರ್ಮ ಹೇಳಿದರು.
ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ , ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಸಹಯೋಗದೊಂದಿಗೆ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಭಾನುವಾರ ನಡೆದ 135 ನೇ ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ, ಸ್ವಯಂ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಗರ ಭಾಗದಲ್ಲಿ ಬ್ಲಡ್ ಬ್ಯಾಂಕ್ ಗಳು ಅಗತ್ಯ ಸಂದರ್ಭದಲ್ಲಿ ರಕ್ತ ಒದಗಿಸುವ ಕೆಲಸಮಾಡುತ್ತದೆ ಆದರೆ ಗ್ರಾಮೀಣ ಭಾಗಗಳಲ್ಲಿ ಅತಂಹ ವ್ಯವಸ್ಥೆಗಳು ಇರುವುದಿಲ್ಲ. ಸೇವಾಂಜಲಿ ಸಂಸ್ಥೆ ಹಲವು ವರ್ಷಗಳಿಂದ ಇಂತಹ ಸೇವಾ ಕಾರ್ಯ ನಡೆಸುತ್ತಿರುವುದು ಅಭಿನಂದನೀಯ ಎಂದರು.
ರೋಟರಿ ಜಿಲ್ಲೆ 3181ನ ಮಾಜಿ ಗವರ್ನರ್ ಎನ್.ಪ್ರಕಾಶ್ ಕಾರಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ರಕ್ತದ ಕೊರತೆ ಎದುರಿಸುತ್ತಿರುವ ಈ ಕಾಲಘಟ್ಟದಲ್ಲಿ ಆಸ್ಪತ್ರೆಗಳ ಬೇಡಿಕೆಗನುಗುಣವಾಗಿ ಸೇವಾಂಜಲಿ ಸಂಸ್ಥೆ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದೆ.
ಸೇವಾಂಜಲಿಯ ಕೃಷ್ಣ ಕುಮಾರ್ ಪೂಂಜ ಅವರು
ಅನೇಕ ಸಂಸ್ಥೆಗಳಿಗೆ ಪ್ರೇರಕರಾಗಿದ್ದು ಕೊಂಡು ಜನ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿ ಮಾಡಬೇಕಾಧ ಕಾರ್ಯವನ್ನು ಅವರು ಮಾಡುತ್ತಿದ್ದು ಸ್ವಸ್ಥ, ಸುಂದರ ಸಮಾಜ ನಿರ್ಮಾಣವಾಗಲು ನಾವೆಲ್ಲಾ ಅವರೊಂದಿಗೆ ಕೈ ಜೋಡಿಸುವಂತೆ ತಿಳಿಸಿದರು.
ಸೇವಾಂಜಲಿಯ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
ಕೆಎಂಸಿ ಬ್ಲಡ್ ಬ್ಯಾಂಕಿನ ಅನಿಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ಯುನಿಟ್ ರಕ್ತದಾನ ಮಾಡುವ ಮೂಲಕ 4 ಮಂದಿಯ ಪ್ರಾಣ ಉಳಿಸಲು ಸಾಧ್ಯವಿದ್ದು ಸ್ಚಯಂ ಪ್ರೇರಣೆಯಿಂದ ರಕ್ತದಾನದಲ್ಲಿ ಭಾಗವಹಿಸುವಂತೆ ತಿಳಿಸಿದರು. ಟ್ರಸ್ಟಿ ಕೊಡ್ಮಾಣ್ ದೇವದಾಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪ್ರಮುಖರಾದ ಡಾ. ರಾಮಕೃಷ್ಣ ಇರ್ವತ್ತೂರು ಸುಕೇಶ್ ಶೆಟ್ಟಿ ತೇವು, ಅರ್ಜುನ್ ಪೂಂಜ, ಬಿ.ನಾರಾಯಣ ಮೇರಮಜಲು, ದಿನೇಶ್ ತುಂಬೆ, ಹರ್ಷ ರಾಜ್ ಸುಜೀರು, ಪ್ರಕಾಶ್ ಕಿದೆಬೆಟ್ಟು, ಸುರೇಶ್ ರೈ ಪೆಲಪಾಡಿ, ಮೋಹನ್ ಬೆಂಜನಪದವು, ಜಯಾನಂದ ನಾಯ್ಕ್ ಕುಮ್ಡೇಲು, ಧನರಾಜ್ ತುಂಬೆ, ಪ್ರಮೋದ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 57 ಯುನಿಟ್ ರಕ್ತ ಸಂಗ್ರಹವಾಯಿತು.
Be a part of the change
Support our activities
Your donations directly fund these programmes. Every contribution helps us reach more people in need.